ಪಾತ -
ಕ್ರಾಂತಿವೃತ್ತವನ್ನು (ಎಕ್ಲಿಪ್ಟಿಕ್) ಗ್ರಹದ ಯಾ ಉಪಗ್ರಹದ ಕಕ್ಷೆ ಛೇದಿಸುವ ಎರಡು ವ್ಯಾಸೀಯ ವಿರುದ್ಧ ಬಿಂದುಗಳ ಪೈಕಿ ಒಂದು (ನೋಡ್). ದಕ್ಷಿಣದಿಂದ ಉತ್ತರಕ್ಕೆ ಅಡ್ಡ ಹಾಯುವ ಬಿಂದು ಆರೋಹಣ ಪಾತ ಅಥವಾ ರಾಹುಬಿಂದು; ಉತ್ತರದಿಂದ ದಕ್ಷಿಣಕ್ಕೆ ಅಡ್ಡಹಾಯುವ ಬಿಂದು ಅವರೋಹಣ ಪಾತ ಅಥವಾ ಕೇತು ಬಿಂದು. ಇವು ಕಾಲ್ಪನಿಕ ಬಿಂದುಗಳು.
(ಆರ್.ಆರ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ